ಸಂಧಿಗಳ ಮಹಾಸಂಗಮ: ಕನ್ನಡ ಮತ್ತು ಸಂಸ್ಕೃತ ಸಂಧಿಗಳ ಪೂರ್ಣ ವಿವರ

 



ಸಂಧಿಗಳು

ಎರಡು ಅಕ್ಷರಗಳು ಕಾಲವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಒಂದಕ್ಕೊಂದು ಸೇರುವುದನ್ನು ಸಂಧಿ ಎನ್ನುತ್ತಾರೆ. ಸಂಧಿಗಳಲ್ಲಿ ಎರಡು ಮುಖ್ಯ ವಿಧಗಳಿವೆ:

ಕನ್ನಡ ಸಂಧಿಗಳು

ಸಂಸ್ಕೃತ ಸಂಧಿಗಳು

1. ಕನ್ನಡ ಸಂಧಿಗಳು

ಕನ್ನಡ ಪದಗಳ ನಡುವೆ ಅಥವಾ ಒಂದು ಕನ್ನಡ ಮತ್ತು ಒಂದು ಸಂಸ್ಕೃತ ಪದದ ನಡುವೆ ನಡೆಯುವ ಸಂಧಿಗಳು.

ಲೋಪ ಸಂಧಿ:

 ಸ್ವರದ ಮುಂದೆ ಸ್ವರ ಬಂದಾಗ ಅರ್ಥ ಕೆಡದಿದ್ದರೆ ಪೂರ್ವ ಪದದ ಕೊನೆಯ ಸ್ವರವು ಬಿಟ್ಟು ಹೋಗುವುದು. 

ಊರು + ಅಲ್ಲಿ = ಊರಲ್ಲಿ (ಉ ಲೋಪ)

ಆಗಮ ಸಂಧಿ:

ಸ್ವರದ ಮುಂದೆ ಸ್ವರ ಬಂದಾಗ ಲೋಪ ಮಾಡಿದರೆ ಅರ್ಥ ಕೆಡುವುದಾದರೆ, ಮಧ್ಯದಲ್ಲಿ 'ಯ' ಅಥವಾ 'ವ' ಅಕ್ಷರ ಹೊಸದಾಗಿ ಬರುವುದು. 

ಶಾಲೆ + ಅಲ್ಲಿ = ಶಾಲೆಯಲ್ಲಿ ('ಯ' ಆಗಮ)

ಮಗು + ಅನ್ನು = ಮಗುವನ್ನು ('ವ' ಆಗಮ)

ಆದೇಶ ಸಂಧಿ:

ಉತ್ತರ ಪದದ ಆದಿಯಲ್ಲಿರುವ ಕ, ತ, ಪ ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗಿ ಬರುವುದು. 

ಮಳೆ + ಕಾಲ = ಮಳೆಗಾಲ

ಮೈ + ತೊಳೆ = ಮೈದೊಳೆ

ಕಣ್ + ಪನಿ = ಕಣ್ಬನಿ



2. ಸಂಸ್ಕೃತ ಸಂಧಿಗಳು

ಎರಡು ಸಂಸ್ಕೃತ ಪದಗಳು ಒಂದಕ್ಕೊಂದು ಸೇರಿದಾಗ ಸಂಭವಿಸುವ ಸಂಧಿಗಳು.

ಅ) ಸ್ವರ ಸಂಧಿಗಳು:

ಸವರ್ಣದೀರ್ಘ ಸಂಧಿ: ಒಂದೇ ಜಾತಿಯ ಸ್ವರಗಳು (ಅ-ಅ, ಇ-ಇ, ಉ-ಉ) ಒಂದರ ಮುಂದೆ ಒಂದು ಬಂದಾಗ ಅವೆರಡರ ಸ್ಥಾನದಲ್ಲಿ ದೀರ್ಘ ಸ್ವರ ಬರುವುದು. 

ಉದಾ: ದೇವ + ಆಲಯ = ದೇವಾಲಯ

ಗುಣ ಸಂಧಿ: 

'ಅ' ಅಥವಾ 'ಆ' ಕಾರದ ಮುಂದೆ 'ಇ-ಈ' ಬಂದರೆ 'ಏ' ಕಾರ, 'ಉ-ಊ' ಬಂದರೆ 'ಓ' ಕಾರ ಮತ್ತು 'ಋ' ಕಾರ ಬಂದರೆ 'ಅರ್' ಕಾರ ಆದೇಶವಾಗಿ ಬರುವುದು.

 ಉದಾ: ಮಹಾ + ಇಂದ್ರ = ಮಹೇಂದ್ರ

                ಮಹಾ + ಋಷಿ = ಮಹರ್ಷಿ

ವೃದ್ಧಿ ಸಂಧಿ:

 'ಅ-ಆ' ಕಾರಗಳ ಮುಂದೆ 'ಏ-ಐ' ಬಂದರೆ 'ಐ' ಕಾರ, 'ಓ-ಔ' ಬಂದರೆ 'ಔ' ಕಾರ ಬರುವುದು. 

(ಉದಾ: ವನ + ಓಷಧಿ = ವನೌಷಧಿ)

ಯಣ್ ಸಂಧಿ:

 'ಇ-ಈ, ಉ-ಉ, ಋ' ಕಾರಗಳ ಮುಂದೆ ಸವರ್ಣವಲ್ಲದ ಸ್ವರ ಬಂದಾಗ 'ಯ್, ವ್, ರ್' ವ್ಯಂಜನಗಳು ಬರುವುದು. 

(ಉದಾ: ಪ್ರತಿ + ಏಕ = ಪ್ರತ್ಯೇಕ)

ಆ) ವ್ಯಂಜನ ಸಂಧಿಗಳು:

ಶ್ಚುತ್ವ ಸಂಧಿ: ಸ-ಕಾರ ತ-ವರ್ಗಗಳಿಗೆ ಶ-ಕಾರ ಚ-ವರ್ಗಗಳು ಪರವಾದಾಗ ಶ-ಕಾರ ಚ-ವರ್ಗಗಳೇ ಬರುತ್ತವೆ. 

(ಉದಾ: ಸತ್ + ಚಾರಿತ್ರ್ಯ = ಸಚ್ಚಾರಿತ್ರ್ಯ)

ಜಶ್ತ್ವ ಸಂಧಿ: 

ವರ್ಗದ ಪ್ರಥಮ ಅಕ್ಷರಗಳಿಗೆ ಅದೇ ವರ್ಗದ ಮೂರನೇ ಅಕ್ಷರಗಳು (ಗ, ಜ, ಡ, ದ, ಬ) ಆದೇಶವಾಗಿ ಬರುವುದು. 

(ಉದಾ: ವಾಗ್ + ದೇವಿ = ವಾಗ್ದೇವಿ)

ಅನುನಾಸಿಕ ಸಂಧಿ: 

ವರ್ಗದ ಪ್ರಥಮ ಅಕ್ಷರಗಳಿಗೆ ಅನುನಾಸಿಕ ಅಕ್ಷರಗಳು (ಙ, ಞ, ಣ, ನ, ಮ) ಪರವಾದಾಗ ಅದೇ ವರ್ಗದ ಅನುನಾಸಿಕಗಳೇ ಬರುವುದು. 

(ಉದಾ: ಸತ್ + ಮತಿ=ಸನ್ಮತಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History