ಕನ್ನಡ ಸಾಹಿತ್ಯ ಚರಿತ್ರೆ: ಎಫ್.ಡಿ.ಎ ಮತ್ತು ಎಸ್.ಡಿ.ಎ ಪರೀಕ್ಷಾ ಸಿದ್ಧತೆಗಾಗಿ ಪ್ರಮುಖ ಕಾಲಘಟ್ಟಗಳ ಕೈಪಿಡಿ.

 


ಕನ್ನಡ ಸಾಹಿತ್ಯದ ಪ್ರಮುಖ ಮೂರು ಕಾಲಘಟ್ಟಗಳು


ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಹಂತಗಳು ಭಾಷೆ ಹಾಗೂ ಸಾಹಿತ್ಯಿಕ ವೈವಿಧ್ಯತೆಯಿಂದ ಕನ್ನಡದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ.


ಕನ್ನಡ ಸಾಹಿತ್ಯದ ಚರಿತ್ರೆಯನ್ನು ಅದರ ಭಾಷೆಯ ಸ್ವರೂಪ ಮತ್ತು ಸಾಹಿತ್ಯದ ಶೈಲಿಯ ಆಧಾರದ ಮೇಲೆ ಪ್ರಮುಖವಾಗಿ ಮೂರು ಕಾಲಘಟ್ಟಗಳಾಗಿ ವಿಂಗಡಿಸಲಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಕಂಡುಬರುವ ಪ್ರಮುಖ ಮಹಾಕವಿಗಳ/ಕವಿಗಳ/ಮಹನೀಯರ  ವಿವರಗಳು ಇಲ್ಲಿವೆ:

 

1. ಹಳಗನ್ನಡ (ಕ್ರಿ.ಶ. 450 ರಿಂದ ಕ್ರಿ.ಶ. 1150)

ಇದು ಕನ್ನಡದ ಅತ್ಯಂತ ಆರಂಭಿಕ ಮತ್ತು ಪ್ರೌಢ ಹಂತದ ಸಾಹಿತ್ಯ ಕಾಲ.

 

ಲಕ್ಷಣಗಳು:

ಸಂಸ್ಕೃತ ಭಾಷೆಯು ಭೂಯಿಷ್ಠವಾದ ಭಾಷೆ.

 ಚಂಪೂ ಶೈಲಿ (ಗದ್ಯ ಮತ್ತು ಪದ್ಯಗಳ ಮಿಶ್ರಣ)

ಖ್ಯಾತ ಕರ್ನಾಟಕ ವೃತ್ತಗಳ ಬಳಕೆ.

 

ಪ್ರಮುಖ ಕವಿಗಳು:

ರತ್ನತ್ರಯರಾದ

1.    ಆದಿಕವಿ ಪಂಪ

2.    ರನ್ನ

3.    ಪೊನ್ನ ಹಾಗೂ ಶಿವಕೋಟ್ಯಾಚಾರ್ಯರು.

 






ಪ್ರಮುಖ ಕೃತಿಗಳು:

1.    ವಡ್ಡಾರಾಧನೆ

ಕನ್ನಡ ಭಾಷೆಯಲ್ಲಿ ಲಭ್ಯವಾದ ಮೊದಲ ಗದ್ಯ ಕೃತಿ.

 

     ಕರ್ತೃ:-ಶಿವಕೋಟ್ಯಾಚಾರ್ಯರು.

 

2.    ವಿಕ್ರಮಾರ್ಜುನ ವಿಜಯ, ಗದಾಯುದ್ಧ.

ಕರ್ತೃ:-ಪಂಪ

    ವಿಶೇಷತೆ: ಈ ಕಾಲವನ್ನು 'ಪಂಪ ಯುಗ' ಅಥವಾ 'ಜೈನ ಯುಗ' ಎಂದೂ       ಕರೆಯುತ್ತಾರೆ.

 

 

2. ನಡುಗನ್ನಡ (ಕ್ರಿ.ಶ. 1150 ರಿಂದ ಕ್ರಿ.ಶ. 1850)

ಜನಸಾಮಾನ್ಯರಿಗೆ ಹತ್ತಿರವಾದ ಭಾಷೆ ಮತ್ತು ಛಂದೋಪ್ರಕಾರಗಳು ಬಳಕೆಗೆ ಬಂದ ಕಾಲ.

 

ಲಕ್ಷಣಗಳು:

ಸಂಸ್ಕೃತದ ಪ್ರಭಾವ ಕಡಿಮೆಯಾಗಿ ಸರಳ ಕನ್ನಡದ ಬಳಕೆ

ವಚನ, ರಗಳೆ, ಷಟ್ಪದಿ, ಸಾಂಗತ್ಯ ಮತ್ತು ಕೀರ್ತನೆಗಳ ಉದಯ.

 

ಪ್ರಮುಖ ಕವಿಗಳು/ಮಹನೀಯರು:-

1.ಬಸವಣ್ಣ

2.ಅಕ್ಕಮಹಾದೇವಿ

3. ಹರಿಹರ

4. ರಾಘವಾಂಕ

5. ಕುಮಾರವ್ಯಾಸ

6.ಕನಕದಾಸರು ಹಾಗೂ

7.ಪುರಂದರದಾಸರು.

 



































ಪ್ರಮುಖ ಕೃತಿಗಳು:

 ಕರ್ಣಾಟ ಭಾರತ ಕಥಾಮಂಜರಿ

ಹರಿಶ್ಚಂದ್ರ ಕಾವ್ಯ

 ಜೈಮಿನಿ ಭಾರತ.

 

ವಿಶೇಷತೆ:

ಇದನ್ನು 'ವಚನ ಸಾಹಿತ್ಯ' ಮತ್ತು ದಾಸ ಸಾಹಿತ್ಯ'ಗಳ  ಕಾಲವೆಂದು ಕರೆಯಲಾಗುತ್ತದೆ.

ವೀರಶೈವ ಮತ್ತು ವೈಷ್ಣವ ಸಾಹಿತ್ಯ ಇಲ್ಲಿ ಉತ್ತುಂಗಕ್ಕೇರಿತು.

 

 

3. ಹೊಸಗನ್ನಡ (ಕ್ರಿ.ಶ. 1850 ರಿಂದ ಇಂದಿನವರೆಗೆ)

ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಮತ್ತು ವೈಜ್ಞಾನಿಕ ವಿಚಾರಗಳೊಂದಿಗೆ ಬೆಳೆದುಬಂದ ಆಧುನಿಕ ಕಾಲ.

 

ಲಕ್ಷಣಗಳು:

1.    ಸರಳ ಸಂವಹನ ಭಾಷೆ, ಪ್ರಾಸದ ಹಂಗಿಲ್ಲದ ಲಲಿತ ಸಾಹಿತ್ಯ.

2.    ಕಾದಂಬರಿ, ಸಣ್ಣಕಥೆ, ನಾಟಕ ಮತ್ತು ಲೇಖನಗಳ ಪ್ರಾಧಾನ್ಯತೆ.

 

ಪ್ರಮುಖ ಕಾಲಘಟ್ಟಗಳು:

ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ.

 

ಪ್ರಮುಖ ಕವಿಗಳು/ಲೇಖಕರು:

ಬಿ.ಎಂ.ಶ್ರೀ, ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು.ಆರ್. ಅನಂತಮೂರ್ತಿ.

 












ವಿಶೇಷತೆ: ಈ ಕಾಲಘಟ್ಟದಲ್ಲಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History