ಕನ್ನಡ ಲಿಂಗಗಳು ಮತ್ತು ವಚನಗಳು ಸಂಪೂರ್ಣ ವಿವರಣೆ | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯ ಕನ್ನಡ ವ್ಯಾಕರಣ ಮಾರ್ಗದರ್ಶಿ
1. ಲಿಂಗಗಳು:-
ವಸ್ತುವಾಗಲಿ ಅಥವಾ ಪ್ರಾಣಿಯಾಗಲಿ ಅದು ಗಂಡು ಅಥವಾ ಹೆಣ್ಣು ಅಥವಾ ಎರಡೂ ಅಲ್ಲದ ಎಂದು ತಿಳಿಸುವುದನ್ನು 'ಲಿಂಗ' ಎನ್ನಲಾಗುತ್ತದೆ.
ಇಲ್ಲಿ ಲಿಂಗ ನಿರ್ಧಾರವು ಕೇವಲ ವ್ಯಕ್ತಿಯ ಜನನದ ಆಧಾರದ ಮೇಲೆ ಮಾತ್ರವಲ್ಲದೆ, ಆ ಪದವು ಸೂಚಿಸುವ ವಸ್ತುವಿನ ಸ್ವರೂಪದ ಮೇಲೂ ಅವಲಂಬಿತವಾಗಿರುತ್ತದೆ.
ಕನ್ನಡದಲ್ಲಿ ಲಿಂಗಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ:
i. ಪುಲ್ಲಿಂಗ: ಗಂಡಸು ಅಥವಾ ಪುರುಷ ವ್ಯಕ್ತಿಗಳನ್ನು ಸೂಚಿಸುವ ಪದಗಳು.
ಪುರುಷ ವಾಚಕ ಪದಗಳನ್ನು ಪುಲ್ಲಿಂಗ ಎನ್ನಲಾಗುತ್ತದೆ.
ಉದಾಹರಣೆ: ಅವನು, ರಾಮ, ಅರಸ, ತಂದೆ, ಹುಡುಗ, ವಿಜ್ಞಾನಿ,ಅಣ್ಣ, ತಂದೆ, ವೈದ್ಯ, ಸೂರ್ಯ.
ii. ಸ್ತ್ರೀಲಿಂಗ:
ಹೆಣ್ಣು ಅಥವಾ ಸ್ತ್ರೀಯರನ್ನು ಸೂಚಿಸುವ ಪದಗಳಿಗೆ 'ಸ್ತ್ರೀಲಿಂಗ' ಎನ್ನುತ್ತಾರೆ.
ಸ್ತ್ರೀ ವಾಚಕ ಅಥವಾ ಹೆಣ್ಣನ್ನು ಸೂಚಿಸುವ ಪದಗಳು ಸ್ತ್ರೀಲಿಂಗಕ್ಕೆ ಸೇರುತ್ತವೆ.
.
ಉದಾಹರಣೆ: ಅವಳು, ಸೀತೆ, ರಾಣಿ, ತಾಯಿ, ಹುಡುಗಿ, ಮಗಳು,ಅಕ್ಕ, ತಾಯಿ, ವೈದ್ಯೆ, ಚಂದ್ರಮತಿ.
iii. ನಪುಂಸಕಲಿಂಗ:
ಪುರುಷರೂ ಅಲ್ಲದ, ಸ್ತ್ರೀಯರೂ ಅಲ್ಲದ ವಸ್ತು, ಪ್ರಾಣಿ, ಪಕ್ಷಿ ಮತ್ತು ಸಸ್ಯಗಳನ್ನು ಸೂಚಿಸುವ ಪದಗಳು.
ಪ್ರಾಣಿಗಳು, ಪಕ್ಷಿಗಳು, ಗಿಡಮರಗಳು ಮತ್ತು ನಿರ್ಜೀವ ವಸ್ತುಗಳನ್ನು (ಗಂಡು-ಹೆಣ್ಣು ಎಂಬ ಭೇದವಿಲ್ಲದೆ) ಸೂಚಿಸುವ ಪದಗಳಿಗೆ 'ನಪುಂಸಕ ಲಿಂಗ' ಎನ್ನುತ್ತಾರೆ.
ಗಂಡು ಅಥವಾ ಹೆಣ್ಣು ಎಂಬ ಭೇದವಿಲ್ಲದ ವಸ್ತುಗಳು, ಪ್ರಾಣಿಗಳು ಮತ್ತು ಸಸ್ಯಗಳನ್ನು ನಪುಂಸಕ ಲಿಂಗವೆಂದು ಕರೆಯಲಾಗುತ್ತದೆ.
ಉದಾಹರಣೆ: ಅದು, ಮರ, ಕಲ್ಲು, ಪುಸ್ತಕ, ನದಿ, ಹಸು, ಪಕ್ಷಿ,ಕಲ್ಲು, ಬೆಟ್ಟ, ಆಕಳು, ಮರ
ವಿಶೇಷ ಸೂಚನೆ: ಕನ್ನಡದಲ್ಲಿ ಕೇವಲ ಮನುಷ್ಯರಿಗೆ ಮಾತ್ರ ಸ್ತ್ರೀ-ಪುರುಷ ಲಿಂಗ ಅನ್ವಯವಾಗುತ್ತದೆ. ಪ್ರಾಣಿಗಳನ್ನು (ಹಸು, ಎತ್ತು) ನಪುಂಸಕಲಿಂಗವೆಂದೇ ಪರಿಗಣಿಸಲಾಗುತ್ತದೆ.
2. ವಚನಗಳು
ವಸ್ತು ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ವ್ಯಾಕರಣದ ರೂಪವೇ ವಚನ.
ವಸ್ತು ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ಸೂಚಿಸುವುದನ್ನು ವಚನ ಎನ್ನಲಾಗುತ್ತದೆ.
ಇದರಲ್ಲಿ ಎರಡು ವಿಧ:
ಏಕವಚನ: ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವನ್ನು ಸೂಚಿಸುವುದು.
ಉದಾಹರಣೆ: ಮರ, ಹುಡುಗ, ಹಕ್ಕಿ, ಪುಸ್ತಕ, ನಾನು, ನೀನು.
ಬಹುವಚನ: ಒಂದಕ್ಕಿಂತ ಹೆಚ್ಚು ವ್ಯಕ್ತಿ ಅಥವಾ ವಸ್ತುಗಳನ್ನು ಸೂಚಿಸುವುದು.
ಉದಾಹರಣೆ: ಮರಗಳು, ಹುಡುಗರು, ಹಕ್ಕಿಗಳು, ಪುಸ್ತಕಗಳು, ನಾವು, ನೀವು.
ಬಹುವಚನ ಪ್ರತ್ಯಯಗಳು:
'ಅರು' ಪ್ರತ್ಯಯ: (ಮನುಷ್ಯರಿಗೆ) - ಉದಾ: ಮನುಷ್ಯ + ಅರು = ಮನುಷ್ಯರು.
'ಗಳು' ಪ್ರತ್ಯಯ: (ವಸ್ತು/ಪ್ರಾಣಿಗಳಿಗೆ) - ಉದಾ: ಮರ + ಗಳು = ಮರಗಳು.
'ಅಂದಿರು' ಪ್ರತ್ಯಯ: (ಗೌರವಾರ್ಥವಾಗಿ) - ಉದಾ: ತಾಯಿ + ಅಂದಿರು = ತಾಯಂದಿರು.
ಪರೀಕ್ಷೆಗಾಗಿ ನೆನಪಿಡಬೇಕಾದ ಪ್ರಮುಖ ಅಂಶಗಳು:
ಗೌರವಾರ್ಥಕ ಬಹುವಚನ: ಒಬ್ಬ ವ್ಯಕ್ತಿಯೇ ಇದ್ದರೂ ಗೌರವ ನೀಡಲು ಬಹುವಚನ ಬಳಸುತ್ತೇವೆ (ಉದಾ: 'ಗುರುಗಳು ಬಂದರು').
ಮಹತ್ ಮತ್ತು ಅಮಹತ್: ಚೇತನವುಳ್ಳ (ಬುದ್ಧಿವಂತ) ಜೀವಿಗಳನ್ನು 'ಮಹತ್' ಎಂದೂ, ಜಡ ವಸ್ತು ಹಾಗೂ ಪ್ರಾಣಿಗಳನ್ನು 'ಅಮಹತ್' ಎಂದೂ ಕರೆಯಲಾಗುತ್ತದೆ.
ಲಿಂಗ ಬದಲಾವಣೆ: ಪರೀಕ್ಷೆಯಲ್ಲಿ ಲಿಂಗ ಬದಲಿಸಿ ಬರೆಯಲು ಕೇಳುತ್ತಾರೆ.
1. ಅವನು × ಅವಳು
2. ಅಜ್ಜ × ಅಜ್ಜಿ
3. ನಾಯಕ × ನಾಯಕಿ
4. ನಪುಂಸಕಲಿಂಗ ಬಹುವಚನ: ಪ್ರಾಣಿ ಅಥವಾ ವಸ್ತುಗಳಿಗೆ 'ಗಳು' ಪ್ರತ್ಯಯ ಮಾತ್ರ ಸೇರುತ್ತದೆ (ಉದಾ: ಹಸುಗಳು, ಕಲ್ಲುಗಳು).
ಲಿಂಗ ಮತ್ತು ವಚನಗಳು ಭಾಷೆಗೆ ಶಿಸ್ತನ್ನು ನೀಡುತ್ತವೆ. ಇವುಗಳ ಸರಿಯಾದ ಜ್ಞಾನವಿಲ್ಲದೆ ವಾಕ್ಯ ರಚನೆ ಮಾಡಿದರೆ ಅರ್ಥಸ್ಫುಟವಾಗುವುದಿಲ್ಲ. ಉದಾಹರಣೆಗೆ, "ಹುಡುಗಿಯು ಬಂದನು" ಎನ್ನುವುದು ವ್ಯಾಕರಣಬದ್ಧವಾಗಿ ತಪ್ಪಾಗುತ್ತದೆ, "ಹುಡುಗಿಯು ಬಂದಳು" ಎನ್ನುವುದೇ ಸರಿ. ಹೀಗೆ ಭಾಷೆಯ ಸೊಗಸನ್ನು ಉಳಿಸಿಕೊಳ್ಳಲು ಲಿಂಗ-ವಚನಗಳ ಅರಿವು ಅತ್ಯಗತ್ಯ.
ಹಿಂದಿನ ವರ್ಷಗಳ ಪರೀಕ್ಷಾ ಪ್ರಶ್ನೆಗಳು
1 'ನರ್ತಕ' ಪದದ ಸ್ತ್ರೀಲಿಂಗ ರೂಪ ಯಾವುದು?
ನರ್ತಕಿ SDA - 2019
2 'ಅವನು' ಪದವು ಈ ಲಿಂಗಕ್ಕೆ ಉದಾಹರಣೆ ಪುಲ್ಲಿಂಗ KARTET - 2021
3 'ಮಗು' ಪದದ ಬಹುವಚನ ರೂಪವೇನು? ಮಕ್ಕಳು FDA - 2017
4 'ಒಡೆಯ' ಪದದ ಸ್ತ್ರೀಲಿಂಗ ರೂಪವೇನು? ಒಡತಿ GPSTR - 2022
5 'ಸ್ವಾಮಿ' ಪದದ ಬಹುವಚನ ರೂಪ ಯಾವುದು? ಸ್ವಾಮಿಗಳು SDA - 2018
6 'ಪಂಡಿತ' ಪದದ ಸ್ತ್ರೀಲಿಂಗ ರೂಪ ತಿಳಿಸಿ ಪಂಡಿತೆ FDA - 2021
7 'ಅಕ್ಕ' ಪದಕ್ಕೆ ಸರಿಯಾದ ಬಹುವಚನ ರೂಪ ಯಾವುದು? ಅಕ್ಕಂದಿರು KARTET - 2019
8 'ಸೂರ್ಯ' ಪದವು ಈ ಲಿಂಗಕ್ಕೆ ಸೇರುತ್ತದೆ ಪುನ್ನಪುಂಸಕ ಲಿಂಗ SDA - 2015
9 'ನಾನು' ಪದದ ಬಹುವಚನ ರೂಪವೇನು? ನಾವು FDA - 2011
10 'ತಾಯಿ' ಪದದ ಬಹುವಚನ ರೂಪ ಯಾವುದು? ತಾಯಂದಿರು Police Constable - 2020
11 'ಹುಲಿ' ಪದವನ್ನು ವ್ಯಾಕರಣದಲ್ಲಿ ಯಾವ ಲಿಂಗ ಎನ್ನಬಹುದು? ನಪುಂಸಕ ಲಿಂಗ GPSTR - 2019
12 'ವಿದ್ಯಾರ್ಥಿ' ಪದದ ಸ್ತ್ರೀಲಿಂಗ ರೂಪವೇನು? ವಿದ್ಯಾರ್ಥಿನಿ SDA - 2021
13 'ಗುರು' ಪದದ ಗೌರವಾರ್ಥಕ ಬಹುವಚನ ರೂಪ ಯಾವುದು? ಗುರುಗಳು KARTET - 2022
14 'ದೊಡ್ಡಪ್ಪ' ಪದದ ಸ್ತ್ರೀಲಿಂಗ ರೂಪ ಯಾವುದು? ದೊಡ್ಡಮ್ಮ FDA - 2018
15 'ಹೆಣ್ಣು' ಪದದ ಬಹುವಚನ ರೂಪವೇನು? ಹೆಣ್ಣುಗಳು SDA - 2017
16 'ಅರಸ' ಪದದ ಸ್ತ್ರೀಲಿಂಗ ರೂಪ ಯಾವುದು? ಅರಸಿ KSRTC Exam - 2018
17 'ಅವು' ಪದವು ಯಾವ ವಚನಕ್ಕೆ ಉದಾಹರಣೆ? ಬಹುವಚನ FDA - 2019
18 'ಸೇವಕ' ಪದದ ಸ್ತ್ರೀಲಿಂಗ ರೂಪವೇನು?
ಸೇವಕಿ SDA - 2013
19 'ಮಹತ್' ಎಂದರೆ ಏನನ್ನು ಸೂಚಿಸುತ್ತದೆ? ಚೇತನವುಳ್ಳ ಬುದ್ಧಿಜೀವಿಗಳು KARTET - 2015
20 'ಪುಸ್ತಕ' ಪದದ ಬಹುವಚನ ರೂಪವೇನು? ಪುಸ್ತಕಗಳು FDA - 2021
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ