ಭಾರತದ ಪ್ರಾಚೀನ ಇತಿಹಾಸ -'ಭಾರತೀಯ ಇತಿಹಾಸದ ಆಧಾರಗಳು'

 


 'ಭಾರತೀಯ ಇತಿಹಾಸದ ಆಧಾರಗಳು' 


ಇತಿಹಾಸವನ್ನು ರಚಿಸಲು ಅಥವಾ ಪುನರ್ರಚಿಸಲು ಪುರಾವೆಗಳು ಬಹಳ ನಿರ್ಣಾಯಕ ಪಾತ್ರವನ್ನು ಹೊಂದಿವೆ.  



ಇತಿಹಾಸವನ್ನು ರಚಿಸಲು ಅಥವಾ ಪುನರ್ರಚಿಸಲು ಬಳಸುವ ವಿವಿಧ ಆಕರಗಳನ್ನು ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಿದೆ:


1. ಬರವಣಿಗೆಯ ಆಧಾರಗಳು 

ಇವುಗಳನ್ನು ದೇಶೀಯ ಮತ್ತು ವಿದೇಶಿ ಬರವಣಿಗೆಗಳೆಂದು ವಿಭಾಗಿಸಲಾಗಿದೆ:


ದೇಶೀಯ ಬರವಣಿಗೆಗಳು: ಇದರಲ್ಲಿ ಧಾರ್ಮಿಕ ಮತ್ತು ಲೌಕಿಕ ಸಾಹಿತ್ಯ ಸೇರಿದೆ.

ಅಷ್ಟಾಧ್ಯಾಯ-ಪಾಣಿನಿ

ಅರ್ಥಶಾಸ್ತ್ರ-ಕೌಟಿಲ್ಯ

ಮುದ್ರಾರಾಕ್ಷಸ-ವಿಶಾಖದತ್ತ

ಬೃಹತ್ಕಥಾ ಮಂಜರಿ-ಕ್ಷೇಮೇಂದ್ರ

ಮಹಾಭಾಷ್ಯ-ಪತಂಜಲಿ

ಮಾಲವಿಕಾಗ್ನಿಮಿತ್ರ-ಕಾಳಿದಾಸ

ನೀತಿಸೂತ್ರ-ಕಮಂಡಕ

ದೇವಿಚಂದ್ರಗುಪ್ತ-ವಿಶಾಖದತ್ತ

ಮೃಚ್ಛಕಟಿಕ-ಶೂದ್ರಕ

ದಶಕುಮಾರಚರಿತ-ದಂಡಿ

ಕಥಾ ಸರಿತ್ಸಾಗರ-ಸೋಮದೇವ

ಹರ್ಷಚರಿತೆ-ಬಾಣಭಟ್ಟ

ವಾಕ್ಪತಿ-ಗೌಡವಾಹೋ

ವಿಕ್ರಮಾಂಕ ದೇವ ಚರಿತೆ-ಬಿಲ್ಹನ

ಪ್ರಥ್ವಿರಾಜ್ ವಿಜಯ್-ಜಯಂಕ

ರಾಜತರಂಗಿಣಿ-ಕಲ್ಹಣ (ಕಾಶ್ಮೀರದ ಇತಿಹಾಸ)

ಪ್ರಥ್ವಿರಾಜ್ ರಾಸೋ-ಚಾಂದ ಬರ್ಧಾಯಿ


ವೈದಿಕ ಸಾಹಿತ್ಯ: ನಾಲ್ಕು ವೇದಗಳು (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ), ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು, ವೇದಾಂಗಗಳು ಮತ್ತು ಪುರಾಣಗಳು.


ಬೌದ್ಧ ಸಾಹಿತ್ಯ: ತ್ರಿಪಿಟಕಗಳು (ವಿನಯ, ಸುತ್ತ ಮತ್ತು ಅಭಿದಮ್ಮ ಪೀಟಕಗಳು), ದೀಪವಂಶ, ಮಹಾವಂಶ ಇತ್ಯಾದಿ.


ಜೈನ ಸಾಹಿತ್ಯ: ಅಂಗಗಳು ಮತ್ತು ಉಪಾಂಗಗಳು (ಪ್ರಾಕೃತ ಭಾಷೆಯಲ್ಲಿವೆ).


ಐತಿಹಾಸಿಕ ಬರವಣಿಗೆಗಳು: ಕೌಟಿಲ್ಯನ 'ಅರ್ಥಶಾಸ್ತ್ರ', ವಿಶಾಖದತ್ತನ 'ಮುದ್ರಾರಾಕ್ಷಸ', ಕಲ್ಹಣನ 'ರಾಜತರಂಗಿಣಿ' (ಕಾಶ್ಮೀರದ ಇತಿಹಾಸ), ಬಾಣಭಟ್ಟನ 'ಹರ್ಷಚರಿತ' ಇತ್ಯಾದಿ.





ವಿದೇಶಿ ಬರವಣಿಗೆಗಳು: ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ವರದಿಗಳು.  

ಹೆರೊಡೋಟಸ್-ಹಿಸ್ಟೋರಿಕಾ

ಮೆಗಸ್ತನೀಸನ 'ಇಂಡಿಕಾ',

ಫಾಹಿಯಾನ್ ಬರಹಗಳು

ಹ್ಯುಯೆನ್ ತ್ಸಾಂಗ್ ಅವರ 'ಸಿ-ಯೂ-ಕಿ' ಮತ್ತು 

ಅಲ್-ಬೆರೂನಿಯ 'ತಾರಿಖ್-ಅಲ್-ಹಿಂದ್'.



2. ಪುರಾತತ್ವ ಆಧಾರಗಳು

ಇವು ಭೂಮಿಯ ಅಗೆಯುವಿಕೆಯಿಂದ ಅಥವಾ ಮೇಲ್ಮೈಯಲ್ಲಿ ದೊರೆತ ಭೌತಿಕ ಪುರಾವೆಗಳಾಗಿವೆ:


ಭೂ ಉತ್ಖನನಗಳು : ಹರಪ್ಪ, ಮೊಹೆಂಜೋದಾರೋ, ತಕ್ಷಶಿಲೆ ಮತ್ತು ಬ್ರಹ್ಮಗಿರಿಯಂತಹ ಸ್ಥಳಗಳಲ್ಲಿ ನಡೆದ ಸಂಶೋಧನೆಗಳು ನಾಗರಿಕತೆಯ ಪ್ರಾಚೀನತೆಯನ್ನು ತಿಳಿಸುತ್ತವೆ.


ಶಾಸನಗಳು : ಇವುಗಳನ್ನು ಇತಿಹಾಸದ ಅತ್ಯಂತ ನಂಬಲರ್ಹ ಆಧಾರಗಳೆಂದು ಪರಿಗಣಿಸಲಾಗಿದೆ.


ಅಶೋಕನ ಶಾಸನಗಳು: ಭಾರತದಾದ್ಯಂತ ದೊರೆತಿರುವ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಯ ಶಾಸನಗಳು.


ಪ್ರಮುಖ ಶಾಸನಗಳು: ಹಾಥಿಗುಂಫಾ ಶಾಸನ (ಖಾರವೇಲ), ಅಲಹಾಬಾದ್ ಸ್ತಂಭ ಶಾಸನ (ಸಮುದ್ರಗುಪ್ತ), ಐಹೊಳೆ ಶಾಸನ (ಇಮ್ಮಡಿ ಪುಲಿಕೇಶಿ - ರವಿಕೀರ್ತಿ ವಿರಚಿತ).


ನಾಣ್ಯಗಳು : ನಾಣ್ಯಗಳ ಅಧ್ಯಯನವನ್ನು 'ನ್ಯೂಮಿಸ್ಮ್ಯಾಟಿಕ್ಸ್' ಎನ್ನಲಾಗುತ್ತದೆ.



ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಅಂದಿನ ರಾಜರ ಆರ್ಥಿಕ ಸ್ಥಿತಿ, ಸಾಮ್ರಾಜ್ಯದ ವ್ಯಾಪ್ತಿ ಮತ್ತು ವ್ಯಾಪಾರ ಸಂಬಂಧಗಳನ್ನು (ಉದಾಹರಣೆಗೆ ರೋಮ್ ಜೊತೆಗಿನ ವ್ಯಾಪಾರ) ವಿವರಿಸುತ್ತವೆ.



ಸ್ಥಳ - ಸಂಶೋಧಕರು

ಹರಪ್ಪ-ದಯಾರಾಮ್ ಸಾಹ್ನಿ (1921)

ಮೊಹೆಂಜೋದಾರೋ-ಆರ್.ಡಿ. ಬ್ಯಾನರ್ಜಿ (1922)

ನಳಂದ ಮತ್ತು ತಕ್ಷಶಿಲಾ-ಡಾ.ಸ್ಪೂನರ್

ಪಾಟಲಿಪುತ್ರ (ಪಟ್ನಾ)-ಡಾ.ಸ್ಪೂನರ್

ನರ್ಮದಾ ಮತ್ತು ಸಬರಮತಿ-ಡಾ.ಸಂಕಾಲಿಯಾ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History