ರಾಷ್ಟ್ರಕೂಟ ಸಾಮ್ರಾಜ್ಯ: ಇತಿಹಾಸ, ಸಾಹಿತ್ಯ ಮತ್ತು ವಾಸ್ತುಶಿಲ್ಪ | KPSC ಪರೀಕ್ಷಾ ಕೈಪಿಡಿ

 


ಕರ್ನಾಟಕದ ಇತಿಹಾಸದಲ್ಲಿ 'ಸುವರ್ಣಯುಗ' ಎಂದು ಕರೆಸಿಕೊಳ್ಳುವ ರಾಷ್ಟ್ರಕೂಟರ ಆಳ್ವಿಕೆಯು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಮರೆಯಲಾಗದ ಕೊಡುಗೆ ನೀಡಿದೆ. ಅವರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ:


1. ಹಿನ್ನೆಲೆ ಮತ್ತು ಸ್ಥಾಪಕ

ರಾಷ್ಟ್ರಕೂಟರು ಮೂಲತಃ ಲತ್ತಲೂರು (ಇಂದಿನ ಲಾತೂರು) ಪ್ರಾಂತ್ಯದವರು. ಇವರು ಆರಂಭದಲ್ಲಿ ಬಾದಾಮಿ ಚಾಲುಕ್ಯರ ಅಧೀನರಾಗಿದ್ದರು.


ಸ್ಥಾಪಕ: ದಂತಿದುರ್ಗ (ಕ್ರಿ.ಶ. 735 - 756).


ರಾಜಧಾನಿ: ಮಾನ್ಯಖೇಟ (ಇಂದಿನ ಕಲಬುರಗಿ ಜಿಲ್ಲೆಯ ಮಳಖೇಡ).



2. ಲಾಂಛನ ಮತ್ತು ಆಡಳಿತ ಭಾಷೆ

ಸಾಮ್ರಾಜ್ಯದ ಲಾಂಛನ: ಗರುಡ


ಧ್ವಜದ ಲಾಂಛನ: ಪಾಲಿದ್ವಜ ಮತ್ತು ಓಕೆತ (ಗಂಗಾ-ಯಮುನಾ ನದಿಗಳ ಗುರುತು).


ಆಡಳಿತ ಭಾಷೆ: ಕನ್ನಡ ಮತ್ತು ಸಂಸ್ಕೃತ.






3. ಪ್ರಸಿದ್ಧ ರಾಜರು ಮತ್ತು ಸೇನಾ ಸಾಧನೆಗಳು

ರಾಷ್ಟ್ರಕೂಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ತಮ್ಮ ವಿಜಯಪತಾಕೆಯನ್ನು ಹಾರಿಸಿದ್ದರು.


ಧ್ರುವ ಧಾರಾವರ್ಷ: ಉತ್ತರ ಭಾರತದ ಮೇಲೆ ದಾಳಿ ಮಾಡಿ ಕನೌಜ್ ರಾಜರನ್ನು ಸೋಲಿಸಿದ ಮೊದಲ ದಕ್ಷಿಣ ಭಾರತದ ರಾಜ.


ಮೂರನೇ ಗೋವಿಂದ: ರಾಷ್ಟ್ರಕೂಟರಲ್ಲೇ ಅತ್ಯಂತ ಪರಾಕ್ರಮಿ. ಈತನ ಕಾಲದಲ್ಲಿ ಸಾಮ್ರಾಜ್ಯವು ಹಿಮಾಲಯದ ತಪ್ಪಲಿನವರೆಗೆ ವಿಸ್ತರಿಸಿತ್ತು.


ಅಮೋಘವರ್ಷ ನೃಪತುಂಗ: ಈತ ಕಲೆ ಮತ್ತು ಸಾಹಿತ್ಯದ ಪೋಷಕ. 64 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದನು.


ಮೂರನೇ ಕೃಷ್ಣ: ಈತ ಚೋಳರನ್ನು 'ತಕೋಲಂ' ಯುದ್ಧದಲ್ಲಿ ಸೋಲಿಸಿ ರಾಮೇಶ್ವರದವರೆಗೆ ದಿಗ್ವಿಜಯ ಸಾಧಿಸಿದನು.



4. ಆಡಳಿತ ಮತ್ತು ವಿಭಾಗಗಳು

ರಾಷ್ಟ್ರಕೂಟರ ಆಡಳಿತವು ವಿಕೇಂದ್ರೀಕೃತವಾಗಿತ್ತು. ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಈ ಕೆಳಗಿನಂತೆ ವಿಂಗಡಿಸಲಾಗಿತ್ತು:


ರಾಷ್ಟ್ರಕೂಟರ ಆಡಳಿತ ವಿಭಾಗಗಳು ಮತ್ತು ಮುಖ್ಯಸ್ಥರು

ರಾಷ್ಟ್ರ (ಪ್ರಾಂತ್ಯ) -> ರಾಷ್ಟ್ರಪತಿ

ವಿಷಯ (ಜಿಲ್ಲೆ) -> ವಿಷಯಪತಿ

ಭುಕ್ತಿ (ತಾಲೂಕು) -> ಭೋಗಪತಿ

ಗ್ರಾಮ -> ಗಾವುಂಡ / ಪ್ರಭುಗಾವುಂಡ



5. ಸಾಹಿತ್ಯ

ರಾಷ್ಟ್ರಕೂಟರ ಕಾಲವು ಕನ್ನಡ ಸಾಹಿತ್ಯದ ಉತ್ತುಂಗ ಸ್ಥಿತಿಯಾಗಿತ್ತು.


ಕವಿರಾಜಮಾರ್ಗ: ಅಮೋಘವರ್ಷ ನೃಪತುಂಗನ ಆಶ್ರಯದಲ್ಲಿ ರಚಿತವಾದ ಕನ್ನಡದ ಲಭ್ಯವಿರುವ ಮೊದಲ ಲಾಕ್ಷಣಿಕ ಗ್ರಂಥ.


ರತ್ನತ್ರಯರು: ಪಂಪ (ಆದಿಪುರಾಣ, ವಿಕ್ರಮಾರ್ಜುನ ವಿಜಯ), ಪೊನ್ನ (ಶಾಂತಿಪುರಾಣ), ಮತ್ತು ರನ್ನ (ಅಜಿತಪುರಾಣ, ಗದಾಯುದ್ಧ - ರನ್ನನು ರಾಷ್ಟ್ರಕೂಟರ ಕೊನೆಯ ಹಂತದಲ್ಲಿದ್ದವನು).


ಗಣಿತ ಸಾರ ಸಂಗ್ರಹ: ಮಹಾವೀರಾಚಾರ್ಯ (ಗಣಿತಶಾಸ್ತ್ರ).



6. ಕಲೆ ಮತ್ತು ವಾಸ್ತುಶಿಲ್ಪ

ರಾಷ್ಟ್ರಕೂಟರು ವಿಶ್ವಪ್ರಸಿದ್ಧವಾದ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಇವರ ಶೈಲಿಯು ದ್ರಾವಿಡ ಮತ್ತು ವೇಸರ ಶೈಲಿಗಳ ಮಿಶ್ರಣವಾಗಿತ್ತು.



ಕೈಲಾಸನಾಥ ದೇವಾಲಯ (ಎಲ್ಲೋರಾ): ಇದನ್ನು ಮೊದಲನೇ ಕೃಷ್ಣನು ನಿರ್ಮಿಸಿದನು. ಇದು ಒಂದೇ ಬೃಹತ್ ಬಂಡೆಯನ್ನು ಕೆತ್ತಿ ಮಾಡಿದ ಜಗತ್ತಿನ ಅದ್ಭುತಗಳಲ್ಲಿ ಒಂದಾಗಿದೆ.




ನಿರ್ಮಾಣದ ವಿಶೇಷತೆ (ಏಕಶಿಲಾ ಕೆತ್ತನೆ): ಈ ದೇವಾಲಯವನ್ನು ಮೇಲಿನಿಂದ ಕೆಳಕ್ಕೆ ಒಂದೇ ಬೃಹತ್ ಬಂಡೆಯನ್ನು ಕೆತ್ತುತ್ತಾ ಬರಲಾಗಿದೆ. ಸಾಮಾನ್ಯವಾಗಿ ದೇವಾಲಯಗಳನ್ನು ಅಡಿಪಾಯದಿಂದ ಗೋಪುರದವರೆಗೆ ಕಟ್ಟಲಾಗುತ್ತದೆ, ಆದರೆ ಇದನ್ನು ಬೃಹತ್ ಬಂಡೆಯ ಮಧ್ಯದಲ್ಲಿ ಕೆತ್ತಲಾಗಿದೆ. ಇದನ್ನು ನಿರ್ಮಿಸಲು ಸುಮಾರು ೨ ಲಕ್ಷ ಟನ್ ಗಳಿಗಿಂತ ಹೆಚ್ಚು ತೂಕದ ಕಲ್ಲನ್ನು ತೆಗೆದುಹಾಕಲಾಗಿದೆ ಎಂದು ಅಂದಾಜಿಸಲಾಗಿದೆ.


ನಿರ್ಮಾತೃ: ರಾಷ್ಟ್ರಕೂಟ ದೊರೆ ಒಂದನೇ ಕೃಷ್ಣ (ಕ್ರಿ.ಶ. 756-774).


ವಾಸ್ತುಶಿಲ್ಪ ಶೈಲಿ: ಇದು ಪ್ರಧಾನವಾಗಿ ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಆವರಣದಲ್ಲಿ ದಕ್ಷಿಣ ಭಾರತದ ವಾಸ್ತುಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು.


ರಾವಣಾನುಗ್ರಹ ಶಿಲ್ಪ: ಇಲ್ಲಿರುವ ಅತ್ಯಂತ ಸುಂದರ ಶಿಲ್ಪಗಳಲ್ಲಿ 'ರಾವಣಾನುಗ್ರಹ' ಪ್ರಮುಖವಾದುದು. ರಾವಣನು ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನಿಸುತ್ತಿರುವುದು ಮತ್ತು ಶಿವನು ತನ್ನ ಕಾಲಿನ ಹೆಬ್ಬೆರಳಿನಿಂದ ಅದನ್ನು ಅದುಮುತ್ತಿರುವ ಕೆತ್ತನೆ ಅದ್ಭುತವಾಗಿದೆ.






ಎಲಿಫೆಂಟಾ ಗುಹೆಗಳು: ಮುಂಬೈ ಸಮೀಪದ ಈ ಗುಹೆಗಳಲ್ಲಿರುವ 'ತ್ರಿಮೂರ್ತಿ' ಶಿಲ್ಪವು ಬಹಳ ಪ್ರಸಿದ್ಧವಾಗಿದೆ.




ಇತರ ಸ್ಥಳಗಳು: ಪಟ್ಟದಕಲ್ಲಿನ ಜೈನ ನಾರಾಯಣ ದೇವಾಲಯ ಮತ್ತು ಶಿರವಾಳದ ದೇವಾಲಯಗಳು.


7. ಧರ್ಮ ಮತ್ತು ಸಂಸ್ಕೃತಿ

ರಾಷ್ಟ್ರಕೂಟರು ಧಾರ್ಮಿಕ ಸಹಿಷ್ಣುಗಳಾಗಿದ್ದರು. ಇವರ ಕಾಲದಲ್ಲಿ ಹಿಂದೂ ಧರ್ಮದ ಜೊತೆಗೆ ಜೈನ ಧರ್ಮವು ರಾಜಾಶ್ರಯ ಪಡೆದು ಅತ್ಯಂತ ಉತ್ತುಂಗಕ್ಕೇರಿತ್ತು. ಅಮೋಘವರ್ಷ ನೃಪತುಂಗನು ಸ್ವತಃ ಜೈನ ಧರ್ಮದ ಅನುಯಾಯಿಯಾಗಿದ್ದನು. ಅಲ್ಲದೆ, ವ್ಯಾಪಾರಕ್ಕಾಗಿ ಬಂದ ಅರಬ್ಬರಿಗೆ ಮಸೀದಿಗಳನ್ನು ಕಟ್ಟಲು ಅನುಮತಿ ನೀಡುವ ಮೂಲಕ ವಿಶಾಲ ಮನೋಭಾವ ಮೆರೆದಿದ್ದರು.



ಪ್ರಮುಖ ಅಂಶಗಳು (ಪರೀಕ್ಷಾ ದೃಷ್ಟಿಯಿಂದ):

ತ್ರಿಪಕ್ಷೀಯ ಸಂಘರ್ಷ: ಪಾಲರು, ಪ್ರತಿಹಾರರು ಮತ್ತು ರಾಷ್ಟ್ರಕೂಟರ ನಡುವೆ ನಡೆಯಿತು.


ರತ್ನತ್ರಯರು: ಪಂಪ, ಪೊನ್ನ ಮತ್ತು ರನ್ನ (ರನ್ನನು ರಾಷ್ಟ್ರಕೂಟ ಮತ್ತು ಚಾಲುಕ್ಯರ ಸಂಧಿಕಾಲದವನು).


ವಾಸ್ತುಶಿಲ್ಪ: ಎಲ್ಲೋರಾದ ಕೈಲಾಸನಾಥ ದೇವಾಲಯ ಮತ್ತು ಎಲಿಫೆಂಟಾ ಗುಹೆಗಳು ಇವರ ಕಾಲದ ಅತ್ಯುತ್ತಮ ಕೊಡುಗೆಗಳು.


ಕವಿರಾಜಮಾರ್ಗ: ಇದು ಕೇವಲ ಸಾಹಿತ್ಯ ಕೃತಿಯಲ್ಲ, ಅಂದಿನ ಕರ್ನಾಟಕದ ಭೌಗೋಳಿಕ ಗಡಿಗಳನ್ನು (ಕಾವೇರಿಯಿಂದ ಗೋದಾವರಿಯವರೆಗೆ) ವಿವರಿಸುವ ಕೃತಿಯೂ ಹೌದು.


ಸಂಸ್ಥಾಪಕರು: ಮಯೂರವರ್ಮ (ಕದಂಬ), ಪುಲಿಕೇಶಿ (ಚಾಲುಕ್ಯ) ಮತ್ತು ದಂತಿದುರ್ಗ (ರಾಷ್ಟ್ರಕೂಟ) - ಇವರಲ್ಲಿ ಗೊಂದಲ ಬೇಡ.







ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಕೇಳಲಾದ ರಾಷ್ಟ್ರಕೂಟರ ಇತಿಹಾಸದ ಪ್ರಶ್ನೆಗಳು


1 ರಾಷ್ಟ್ರಕೂಟ ಸಾಮ್ರಾಜ್ಯದ ಸ್ಥಾಪಕ ಯಾರು? (FDA - 2011) ದಂತಿದುರ್ಗ


2 ಅಮೋಘವರ್ಷ ನೃಪತುಂಗನು ಬರೆದ ಪ್ರಸಿದ್ಧ ಸಾಹಿತ್ಯ ಕೃತಿ ಯಾವುದು? (KAS - 2014) ಕವಿರಾಜಮಾರ್ಗ


3 ಎಲ್ಲೋರಾದ ಪ್ರಸಿದ್ಧ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು? (SDA - 2015) ಒಂದನೇ ಕೃಷ್ಣ


4 'ಕವಿರಾಜಮಾರ್ಗ'ವು ಯಾವ ಭಾಷೆಯ ಮೊದಲ ಲಕ್ಷಣ ಗ್ರಂಥವಾಗಿದೆ? (FDA - 2017) ಕನ್ನಡ


5 ರಾಷ್ಟ್ರಕೂಟರ ರಾಜಲಾಂಛನ ಯಾವುದಾಗಿತ್ತು? (ಕೆಪಿಎಸ್‌ಸಿ ಗ್ರೂಪ್ ಸಿ) - 2018 ಚಿನ್ನದ ಗರುಡ


6 'ಆದಿಕವಿ' ಎಂದು ಯಾರನ್ನು ಕರೆಯುತ್ತಾರೆ? (SDA - 2019) ಪಂಪ


7 ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದ ಗಣಿತಶಾಸ್ತ್ರಜ್ಞ ಯಾರು? (KAS - 2011) ಮಹಾವೀರಾಚಾರ್ಯ (ಗಣಿತ ಸಾರಸಂಗ್ರಹ)


8 ರಾಷ್ಟ್ರಕೂಟರ ಕಾಲದ ಪ್ರಸಿದ್ಧ ಶಿಕ್ಷಣ ಕೇಂದ್ರ ಯಾವುದಾಗಿತ್ತು? (FDA - 2008) ಸಾಲೋಟಗಿ


9 'ಶಾಂತಿಪುರಾಣ'ವನ್ನು ಬರೆದ ಕವಿ ಯಾರು? (SDA - 2013) ಪೊನ್ನ


10 ಅರಬ್ ಪ್ರವಾಸಿ ಸುಲೈಮಾನ್ ಯಾರ ಆಸ್ಥಾನಕ್ಕೆ ಭೇಟಿ ನೀಡಿದ್ದನು? (KAS - 2005) ಅಮೋಘವರ್ಷ ನೃಪತುಂಗ


11 ರಾಷ್ಟ್ರಕೂಟರ ರಾಜಧಾನಿ ಯಾವುದಾಗಿತ್ತು? (PDO - 2017) ಮಾನ್ಯಖೇಟ (ಮಳಖೇಡ)


12 ರಾಷ್ಟ್ರಕೂಟರ ಕೊನೆಯ ಅರಸ ಯಾರು? (FDA - 2015) ಎರಡನೇ ಕರ್ಕ


13 'ವಿಕ್ರಮಾರ್ಜುನ ವಿಜಯ' ಕೃತಿಯ ಕರ್ತೃ ಯಾರು? (SDA - 2011) ಪಂಪ


14 ಎಲ್ಲೋರಾದ ಗುಹಾಂತರ ದೇವಾಲಯಗಳು ಯಾವ ಜಿಲ್ಲೆಯಲ್ಲಿವೆ? (ಕೆಪಿಎಸ್‌ಸಿ ಗ್ರೂಪ್ ಸಿ - 2016) ಔರಂಗಾಬಾದ್ (ಮಹಾರಾಷ್ಟ್ರ)


15 ಉತ್ತರ ಭಾರತದ ಕನೌಜ್‌ಗಾಗಿ ನಡೆದ ತ್ರಿಪಕ್ಷೀಯ ಸಂಘರ್ಷದಲ್ಲಿ ಭಾಗವಹಿಸಿದ ದಕ್ಷಿಣದ ಮನೆತನ ಯಾವುದು? (KAS - 1999) ರಾಷ್ಟ್ರಕೂಟರು



16 'ಗಣಿತ ಸಾರಸಂಗ್ರಹ' ಕೃತಿಯನ್ನು ಬರೆದವರು ಯಾರು? (KAS - 2011) ಮಹಾವೀರಾಚಾರ್ಯ


17 ರಾಷ್ಟ್ರಕೂಟರ ಕಾಲದ ಪ್ರಸಿದ್ಧ ವಿದ್ಯಾ ಕೇಂದ್ರ 'ಸಾಲೋಟಗಿ' ಯಾವ ಜಿಲ್ಲೆಯಲ್ಲಿದೆ? (SDA - 2009) ವಿಜಯಪುರ


18 ಅರಬ್ಬರು ರಾಷ್ಟ್ರಕೂಟರ ಅರಸರನ್ನು ಏನೆಂದು ಕರೆಯುತ್ತಿದ್ದರು? (FDA - 2013) ಬಲ್ಲಾಳ ಅಥವಾ ಬಲ್ಹರ


19 ಪ್ರಸಿದ್ಧ 'ಎಲಿಫೆಂಟಾ' ಗುಹೆಗಳು ಯಾರ ಕಾಲದ ವಾಸ್ತುಶಿಲ್ಪ? (Group C - 2017) ರಾಷ್ಟ್ರಕೂಟರು


20 'ಗದಾಯುದ್ಧ' ಅಥವಾ 'ಸಾಹಸಭೀಮ ವಿಜಯ' ಬರೆದವರು ಯಾರು?(SDA - 2015) ರನ್ನ


21 ಮುಸ್ಲಿಂ ವ್ಯಾಪಾರಿಗಳಿಗೆ ಮಸೀದಿ ಕಟ್ಟಲು ಅನುಮತಿ ನೀಡಿದ ರಾಷ್ಟ್ರಕೂಟ ಅರಸ ಯಾರು? (KAS - 2002) ಅಮೋಘವರ್ಷ ನೃಪತುಂಗ


22 'ಜಿನಸೇನಾಚಾರ್ಯ'ರು ಯಾರ ಆಸ್ಥಾನದ ಕವಿ ಮತ್ತು ಗುರುಗಳಾಗಿದ್ದರು? (FDA - 2011) ಅಮೋಘವರ್ಷ ನೃಪತುಂಗ


23 ರಾಷ್ಟ್ರಕೂಟರ ಆಡಳಿತದಲ್ಲಿ ಗ್ರಾಮದ ಮುಖ್ಯಸ್ಥನನ್ನು ಏನೆಂದು ಕರೆಯುತ್ತಿದ್ದರು? (PDO - 2017) ಗಾವುಂಡ


24 'ಆದಿಪುರಾಣ' ಕೃತಿಯ ಕರ್ತೃ ಯಾರು? (SDA - 2012) ಪಂಪ

25 ಅಮೋಘವರ್ಷ ನೃಪತುಂಗನು ಬರೆದ ಸಂಸ್ಕೃತ ಕೃತಿ ಯಾವುದು? (KAS - 2014) ಪ್ರಶ್ನೋತ್ತರ ರತ್ನಮಾಲಿಕಾ


26 ರಾಷ್ಟ್ರಕೂಟರ ಕಾಲದಲ್ಲಿ 'ವಿಷಯಪತಿ' ಎಂದರೆ ಯಾರು? (Group C - 2019) ಜಿಲ್ಲಾ ಮಟ್ಟದ ಅಧಿಕಾರಿ


27 ಉತ್ತರ ಭಾರತದ ದಂಡಯಾತ್ರೆ ಕೈಗೊಂಡ ಮೊದಲ ರಾಷ್ಟ್ರಕೂಟ ಅರಸ ಯಾರು? (FDA - 2008) ಧ್ರುವ


28 'ಕವಿಚಕ್ರವರ್ತಿ' ಎಂಬ ಬಿರುದು ಹೊಂದಿದ್ದ ಕವಿ ಯಾರು? (SDA - 2014) ಪೊನ್ನ


29 'ಅಮೋಘವೃತ್ತಿ' ಎಂಬ ವ್ಯಾಕರಣ ಗ್ರಂಥ ಬರೆದವರು ಯಾರು? (KAS - 2005) ಶಾಕಟಾಯನ


30 ರಾಷ್ಟ್ರಕೂಟರ ನಾಣ್ಯಗಳಲ್ಲಿ ಪ್ರಮುಖವಾದುದು ಯಾವುದು? (FDA - 2012) ದ್ರಮ್ಮ ಅಥವಾ ಸುವರ್ಣ


31 ತಕ್ಕೋಲಂ ಕದನ ಯಾರ ನಡುವೆ ನಡೆಯಿತು? (KAS - 2011) ರಾಷ್ಟ್ರಕೂಟರು ಮತ್ತು ಚೋಳರು.


32 ತಕ್ಕೋಲಂ ಕದನದಲ್ಲಿ ಚೋಳರನ್ನು ಸೋಲಿಸಿದ ರಾಷ್ಟ್ರಕೂಟ ಅರಸ ಯಾರು? (SDA - 2017) 3ನೇ ಕೃಷ್ಣ


33 'ಭುವನೈಕ ರಾಮಾಭ್ಯುದಯ' ಕೃತಿಯನ್ನು ಬರೆದವರು ಯಾರು? (Group C - 2015) ಪೊನ್ನ


34 ರಾಷ್ಟ್ರಕೂಟರ ಕಾಲದಲ್ಲಿ 'ಗ್ರಾಮಕೂಟ' ಎಂದರೆ ಯಾರು? (FDA - 2014) ಗ್ರಾಮದ ಆಡಳಿತಾಧಿಕಾರಿ


35 ಪಂಪನು ಯಾರ ಆಸ್ಥಾನದ ಕವಿಯಾಗಿದ್ದನು? (SDA - 2011) ವೇಮುಲವಾಡದ ಹರಿಕೇಸರಿ


36 ರಾಷ್ಟ್ರಕೂಟರು ಯಾವ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು? (KAS - 2008) ಜೈನ ಧರ್ಮ


37 'ಅಜಿತ್ ಪುರಾಣ'ವನ್ನು ಬರೆದ ಕವಿ ಯಾರು? (SDA - 2013) ರನ್ನ


38 ರಾಷ್ಟ್ರಕೂಟರ ಕಾಲದಲ್ಲಿ ರಾಜ್ಯವನ್ನು ಏನೆಂದು ವಿಂಗಡಿಸಲಾಗಿತ್ತು? (FDA - 2016) ರಾಷ್ಟ್ರಗಳಾಗಿ



39 ಅರಬ್ ಪ್ರವಾಸಿ ಅಲ್-ಮಸೂದಿ ಯಾರ ಆಸ್ಥಾನಕ್ಕೆ ಭೇಟಿ ನೀಡಿದ್ದನು? (KAS - 2010) 2ನೇ ಇಂದ್ರ


40 ರಾಷ್ಟ್ರಕೂಟರ ಸಾಮಂತ ರಾಜ್ಯಗಳಲ್ಲಿ ಒಂದಾದ 'ವೇಮುಲವಾಡ' ಎಲ್ಲಿದೆ? (Group C - 2018) ತೆಲಂಗಾಣ


41 ದಂತಿದುರ್ಗನು ಯಾರನ್ನು ಸೋಲಿಸಿ ರಾಷ್ಟ್ರಕೂಟ ಸಾಮ್ರಾಜ್ಯ ಸ್ಥಾಪಿಸಿದನು? (SDA - 2012) 2ನೇ ಕೀರ್ತಿವರ್ಮ (ಚಾಲುಕ್ಯ)


42 ಅಮೋಘವರ್ಷ ನೃಪತುಂಗನು ಎಷ್ಟು ವರ್ಷಗಳ ಕಾಲ ಆಳ್ವಿಕೆ ಮಾಡಿದನು? (FDA - 2015) 64 ವರ್ಷಗಳು


43 ರಾಷ್ಟ್ರಕೂಟರ ಕಾಲದಲ್ಲಿ ಭೂಕಂದಾಯವನ್ನು ಏನೆಂದು ಕರೆಯುತ್ತಿದ್ದರು? (KAS - 2002) ಭಾಗ ಅಥವಾ ಉದ್ರಂಗ


44 'ಸಿದ್ದಾಂತ ಚೂಡಾಮಣಿ'ಯ ಕರ್ತೃ ಯಾರು? (SDA - 2014) ಶಾಕಟಾಯನ


45 ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದವರು ಯಾರು? (FDA - 2011) ಕಲ್ಯಾಣಿ ಚಾಲುಕ್ಯರು


46 'ಪರಮಭಟ್ಟಾರಕ' ಮತ್ತು 'ಮಹಾರಾಜಾಧಿರಾಜ' ಬಿರುದು ಹೊಂದಿದ್ದವರು? (SDA - 2013) ಧ್ರುವ ಅಥವಾ ಗೋವಿಂದ


47 ರಾಷ್ಟ್ರಕೂಟರ ಕಾಲದ ಪ್ರಸಿದ್ಧ ವ್ಯಾಪಾರ ಕೇಂದ್ರ ಯಾವುದು? (Group C - 2016) ಐಹೊಳೆ


48 ಕೈಲಾಸನಾಥ ದೇವಾಲಯವು ಯಾವ ಶೈಲಿಯ ವಾಸ್ತುಶಿಲ್ಪಕ್ಕೆ ಸೇರಿದೆ? (SDA - 2019) ದ್ರಾವಿಡ ಶೈಲಿ


49 ಅಮೋಘವರ್ಷ ನೃಪತುಂಗನು ತನ್ನ ಯಾವ ಬೆರಳನ್ನು ದೇವಿಗೆ ಅರ್ಪಿಸಿದನು? (KAS - 2005) ಬಲಗೈ ಹೆಬ್ಬೆರಳು


50 ರಾಷ್ಟ್ರಕೂಟರ ಕಾಲದಲ್ಲಿ ಬ್ರಾಹ್ಮಣರಿಗೆ ದಾನವಾಗಿ ನೀಡಿದ ಭೂಮಿಯನ್ನು ಏನೆನ್ನಲಾಗುತ್ತಿತ್ತು? (FDA - 2017) ಬ್ರಹ್ಮದೇಯ




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History